Friday, October 20, 2017

ಶುಭನುಡಿ

ಧ್ವನಿ ನಡುಗಿದರೂ ಪರವಾಗಿಲ್ಲ. ಯಾವಾಗಲೂ ಸತ್ಯವನ್ನೇ ನುಡಿಯಿರಿ. ಸತ್ಯ ನಿಮ್ಮ ವ್ಯಕ್ತಿತ್ವವನ್ನೇ ಬದಲಿಸುತ್ತದೆ.

Thursday, October 19, 2017

ಕನ್ನಡ ಜೋಕ್ಸ್,

ಟೈಟಾನಿಕ್ ಮುಳುಗ್ತಾ ಇತ್ತು... ಅದರಲ್ಲಿ ನಮ್ಮ ಸಂತಾ ಮತ್ತು ಬಂತಾ ಇಬ್ಬರೂ ಸವಾರರಾಗಿದ್ರು. ಆಗ
ಸಂತಾ : ಇಲ್ಲಿಂದ ನೆಲ ಎಷ್ಟು ದೂರ ಇದೆ ?
ಬಂತಾ : ಒಂದು ಕಿಲೋಮೀಟರ್.
ತಕ್ಷಣ ಸಮುದ್ರಕ್ಕೆ ಧುಮುಕಿದ ಸಂತಾ , ಅಲ್ಲಿಂದನೇ ಕೇಳ್ದ : ಯಾವ್ ದಿಕ್ ನಲ್ಲಿ ?
ಬಂತಾ : ಕೆಳಕ್ಕೆ !!😀😁😂😃😜😆

ಸರ್ದಾರ್ಜಿ ಸಾಗುತ್ತಿದ್ದ ದೋಣಿ ಮಗುಚಿ ನದಿಗೆ ಬಿದ್ದ. ಇನ್ನೇನು  ಆತ ಮುಳುಗಬೇಕು ಆಗ ಕೈಗೆ ಸಿಕ್ಕಿದ ಒಂದು ಮೀನನ್ನ ದಡಕ್ಕೆ  ಎಸೀತಾ ಹೇಳ್ದ " ನನ್ನ ಬಗ್ಗೆ ಯೋಚನೆ ಮಾಡ್ಬೇಡ.. ನೀನು ಹೇಗಾದ್ರೂ ಜೀವ ಉಳಿಸ್ಕೋ ..!!" 😀😁😂😃😜😆

ಒಂದು ಒಳ್ಳೆ ದಿನ

ಗಂಡ ಹೆಂಡತಿಗೆ 'ಲೇ... ಇವತ್ತು ಒಳ್ಳೆ ದಿನ ಕಣೇ'.
ಹೆಂಡ್ತಿ ಅವನ ಮಾತನ್ನ ತಲೆಗೆ ಹಾಕ್ಕೊಳಲ್ಲ.
ಮರುದಿನ ಮತ್ತೆ...  'ಲೇ ಇವತ್ತು ಕೂಡ ಒಳ್ಳೆ ದಿನ ಕಣೇ'.
ಗಂಡ ಯಾಕೆ ಇವತ್ತೂ ಹೀಗಂತಿದಾನೆ ಅಂತ ಆಶ್ಚರ್ಯ ಆದ್ರೂ... ಹೆಂಡ್ತಿ ಏನೂ ಮಾತಾಡಲ್ಲ. ಅವಳ ಪಾಡಿಗೆ ಅವಳ ಕೆಲಸಗಳಲ್ಲಿ ಬ್ಯುಸಿ ಆಗ್ತಾಳೆ.
ಮರುದಿನ ಮತ್ತೆ.... 'ಲೇ ಇವತ್ತು ಒಳ್ಳೆ ದಿನ ಕಣೇ'.
ಆ ವಾರವಿಡೀ ಗಂಡನದ್ದು ಇದೇ ಡೈಲಾಗು... ಹೆಂಡ್ತೀದು ಸೈಲೆಂಟ್ ಗೆಸ್ಸಿಂಗು!
ಕೊನೆಗೂ ಯಾಕೆ ಹೀಗೆ ಹೇಳ್ತಿದಾನೆ ಗಂಡ ಅನ್ನೋದು ಅರ್ಥಮಾಡ್ಕೊಳೋಕೆ ಆಗದೆಯೇ ಹೆಂಡ್ತಿ ಕೇಳೇ ಬಿಡ್ತಾಳೆ.
'ಯಾಕ್ರೀ ಅವತ್ತಿಂದ ಇದೊಂದೇ ಡೈಲಾಗ್ ಹಿಡ್ಕಂದಿದೀರ? ಏನಾಗಿದೆ ನಿಮಗೆ? ಸರಿ... ಇವತ್ತು ಒಳ್ಳೆ ದಿನ. ಏನೀಗ?
ಗಂಡ ತಲೆ ಕೆರ್ಕೊಳ್ತ್ತಾ ಹೇಳ್ದ 'ಏನಿಲ್ಲ.. ಹೋದವಾರ ನಮ್ಮಿಬ್ರಿಗೂ ಜೋರ್ ಜಗಳ ಆದಾಗ ಒಂದ್ 'ಒಳ್ಳೆ ದಿನ' ನೋಡಿ, ಈ ಮನೆ ಬಿಟ್ ಹೋಗ್ತೀನಿ... ನೀವೂ ಸಾಕು ನಿಮ್ಮನೇನೂ ಸಾಕು ಅಂದಿದ್ಯಲ್ಲ... ಅದಕ್ಕೆ ನೆನಪು ಮಾಡ್ತಾ ಇದ್ದೆ ಅಷ್ಟೇ'!!😁😂😃😜

Wednesday, October 18, 2017

ಕನ್ನಡ ಜೋಕ್ಸ್,

ಜಗ್ಗು :ಬೊಗಳೋ ನಾಯಿ ಕಚೋದಿಲ್ಲ ಯಾಕೆ?
ಗುಗ್ಗು:ಯಾಕಂದ್ರೆ ಒಂದೇ ಸಮಯದಲ್ಲಿ ಎರಡು ಕೆಲಸ ಮಾಡೋದಿಕ್ಕಾಗಲ್ಲ ಅದಕ್ಕೆ. 😀😁😂😃😄

ಗುಂಡ :ಎಲ್ಲರೂ ಯಾಕೆ ಹೀಗೆ ಓಡುತ್ತಿದ್ದಾರೆ?
ಬಂಟ:ಇದು ರನ್ನಿಂಗ್ ರೇಸ್ ಕಣಪ್ಪ ,ಯಾರು ಗೆಲ್ತಾರೋ ಅವರಿಗೆ ಪ್ರೈಜ್ .
ಗುಂಡ:ಗೆಲ್ಲುವವನಿಗೆ ಮಾತ್ರ ಪ್ರೈಜ್ ಅಂದ್ರೆ, ಎಲ್ಲರೂ ಯಾಕೆ ಹುಚ್ಚರ ಥರ ಓಡ್ತಾರೆ?😀😁😂😃😄

Tuesday, October 17, 2017

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ।
ಶತ್ರು ಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋsಸ್ತುತೆ।।
ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನರ್ಧನಃ । ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ॥

ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ.
ನಿಮಗೆ, ನಿಮ್ಮ ಕುಟುಂಬದವರಿಗೆ ಈ
ದೀಪಾವಳಿ ಮಂಗಳ ಮಾಡಲಿ ಎಂದು ಹಾರೈಸುತ್ತಾ...

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು