Sunday, September 17, 2017

ಪೆದ್ದ ಗುಂಡನ ತರ್ಕ

ಪೆದ್ದ ಗುಂಡ ಸ್ಟ್ರೀಟ್ ಲೈಟ್ ಕೆಳಗೆ ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು. ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ.
 ಗುಂಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ.

ಪಾದಚಾರಿ ಹೇಳಿದ್ರು. ಅಲ್ರೀ ಪಕ್ಕದ ಬೀದಿಲಿ ಪರ್ಸ್‌ಬಿದ್ರೆ. ಇಲ್ಲಿ ಹುಡುಕುದ್ರೆ ಸಿಗತ್ತಾ...
ಗುಂಡ ಹೇಳ್ದ ನನ್ನನ್ನೇನು ಅಷ್ಟು ದಡ್ಡ ಅಂದುಕಂಡ್ರ. ಪಕ್ಕದ ಬೀದಿಲಿ ಕರೆಂಟೇ ಇಲ್ಲ. ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ.😃😄😂😅😆😇😀😁

No comments:

Post a Comment