Wednesday, September 13, 2017

ಕನ್ನಡದ ಪ್ರಮುಖ ಕವಿಗಳು :-


ಡಾ|| ದ.ರಾ ಬೇಂದ್ರೆ
(ಅಂಬಿಕಾತನಯದತ್ತ)
ಜನನ : 21.07.1896 ಧಾರವಾಡ.
ಮರಣ :26.10.1981 (ಮುಂಬಯಿಯಲ್ಲಿ)
ಗೌರವ : 1958 - "ಅರಳು-ಮರಳು" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
1965- ಮರಾಠಿ ಕೃತಿ "ಸಂವಾದ" ಕ್ಕೆ ಕೇಳ್ಕರ್ ಬಹುಮಾನ
1966 - ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
1968 - ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ಕೇಂದ್ರ ಸರ್ಕಾರದ "ಪದ್ಮಶ್ರೀ" ಪ್ರಶಸ್ತಿ
1969- ಕೇಂದ್ರ ಸಾಹಿತ್ಯ ಅಕಾಡೆಮಿ "ಫಲೋಗೌರವ"
1974- "ನಾಕುತಂತಿ" ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ
1976 - ಕಾಶಿ ವಿಶ್ವ ವಿದ್ಯಾಪೀಠದ ಗೌರವ ಡಾಕ್ಟರೇಟ್.
ಸಾಹಿತ್ಯಪಥ
ಕೃತಿಗಳು : ಗರಿ, ಸಖೀಗೀತ, ಉಯ್ಯಾಲೆ, ನಾದಲೀಲೆ, ಮೇಘದೂತ, ಗಂಗಾವತರಣ, ಅರಳು-ಮರಳು, ನಮನ , ಪರಿಚಯ, ಉತ್ತರಾಯಣ, ಮುಗಿಲಮಲ್ಲಿಗೆ, ಯಕ್ಷಯಕ್ಷಿ ನಾಕುತಂತಿ, ಬಾ ಹತ್ತರ, ಮತ್ತೆ ಶ್ರಾವಣ ಬಂತು, ಕಾವ್ಯೋದ್ಯೋಗ , ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು , ಸಾಹಿತ್ಯ ವಿರಾಟ್ ಸ್ವರೂಪ , ಕುಮಾರವ್ಯಾಸ , ಟಾಗೋರರ ನೂರೊಂದು ಕವನಗಳು ಉಪನಿಷತ್ ರಹಸ್ಯ ಸಾಹಿತ್ಯ ಮತ್ತು ವಿಮರ್ಶೆ.ಡಾ|| ಕುವೆಂಪು
ಜನನ : 1904 ಡಿಸೆಂಬರ್ 29 ಹಿರೇಕೂಡಿಗೆ.
ನಿಧನ : 10 ನವೆಂಬರ್1994
ಶಿಕ್ಷಣ : 1915 ಮೈಸೂರು ಹಾರ್ಡ್‌ವಿಕ್ ಹೈಸ್ಕೂಲು,
ಮಹಾರಾಜಾ ಕಾಲೇಜಿನಲ್ಲಿ ವ್ಯಾಸಂಗ.
1929 ಕನ್ನಡದಲ್ಲಿ ಎಂ.ಎ., ಪದವಿ ಪದವಿ ಮತ್ತು ಅಧ್ಯಾಪಕ ವೃತ್ತಿ. ಮಹಾರಾಜಾ ಕಾಲೇಜಿನಲ್ಲಿ ಪ್ರಾಧ್ಯಾಪಕ, ಪ್ರಿನ್ಸಿಪಾಲ್ ಹಾಗೂ
ಮೈಸೂರುವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವೃತ್ತಿ.
1955 ರಲ್ಲಿ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ.
1969 ರಲ್ಲಿ ಅದೇ ಕೃತಿಗೆ ಜ್ಞಾನಪೀಠಕ್ಕೆ ಪ್ರಶಸ್ತಿ
1988ರಲ್ಲಿ ‘ಪಂಪ ಪ್ರಶಸ್ತಿ’ಯ ಪ್ರಥಮ ಪುರಸ್ಕಾರ.
1964 ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಮುಂದೆ ಪದ್ಮವಿಭೂಷಣ ಪ್ರಶಸ್ತಿ.
1957 ರಲ್ಲಿ ಧಾರವಾಡದಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಗೌರವ ಎ.ಲಿಟ್.
ಕೃತಿಗಳು : ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಕೊಳಲು, ಕೃತಿಕೆ, ಅಗ್ನಿಹಂಸ, ಕಥನಕವನಗಳು, ಕಲಾಸುಂದರಿ, ನವಿಲು, ಪಕ್ಷಿಕಾಶಿ, ಪಾಂಚಜನ್ಯ, ಕಿಂಕಿಣಿ, ಪ್ರೇಮ ಕಾಶ್ಮೀರ, ಶ್ರೀ ರಾಮಾಯಣ ದರ್ಶನಂ, ರಕ್ತಾಕ್ಷಿ, ಬಿರುಗಾಳಿ, ಬೆರಳ್‌ಗೆ ಕೊರಳ್ , ಶೂದ್ರ ತಪಸ್ವಿ, ಬಲಿದಾನ, ಚಂದ್ರಹಾಸ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಇತ್ಯಾದಿ
ಡಾ|| ಕೆ. ಶಿವರಾಮ ಕಾರಂತ
ಜೀವನಪಥ 
ಜನನ : 10.10.1902, ದ.ಕ.ಜಿಲ್ಲೆಯ ಕೋಟ
ಮರಣ : 1997 ಡಿಸೆಂಬರ್ 
ತಂದೆ-ತಾಯಿ : ಶೇಷ ಕಾರಂತ, ಲಕ್ಷಮ್ಮ 
1959 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
1968 - ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ (ತುರ್ತು ಪರಿಸ್ಥಿತಿ ಹೇರಿಕೆ ಪ್ರತಿಭಟಿಸಿ 
1975ರಲ್ಲಿ ಈ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಾಸ್ ಮರಳಿಸಿದರು) 
1975:(ಮೂಕಜ್ಜಿಯ ಕನಸುಗಳು ) ಜ್ಞಾನಪೀಠ ಪ್ರಶಸ್ತಿ
ತುಲಸೀ ಸಮ್ಮಾನ್ , ಇಂದಿರಾಗಾಂಧಿ ಪರ್ಯಾವರಣ ಪ್ರಶಸ್ತಿ , ಪಂಪ ಪ್ರಶಸ್ತಿ , ಗೌರವ ಡಾಕ್ಟರೇಟ್ ಇತ್ಯಾದಿ ಪ್ರಶಸ್ತಿಗಳು.
ಸಾಹಿತ್ಯ ಪಥ: ಚೋಮನದುಡಿ, ಸರಸಮ್ಮನ ಸಮಾಧಿ, ಮರಳಿ ಮಣ್ಣಿಗೆ , ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು . ಮೈಮನಗಳ ಸುಳಿಯಲ್ಲಿ ಇತ್ಯಾದಿ
ಡಾ|| ಪು.ತಿ ನರಸಿಂಹಾಚಾರ್
ಜೀವನಪಥ
ಜನನ : 17.03.1907 ಮಂಡ್ಯಜಿಲ್ಲೆಯ ಮೇಲುಕೋಟೆ
ಮರಣ: 13.101998
ವೃತ್ತಿ -ಗೌರವ : 1952-60 ಮೈಸೂರು ಶಾಸನ ಸಭೆಯಲ್ಲಿ ಸಂಪಾದಕರು
1996- ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ’ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ
1971 - ಮೈ.ವಿ. ವಿದ್ಯಾಲಯದ ಗೌರವ ದಿ ಲಿಟ್ ಪದವಿ
1990- "ಪದ್ಮಶ್ರೀ" ಪ್ರಶಸ್ತಿ’ಯದುಗಿರಿ ವೀಣೆ’ ಸಮರ್ಪಿತ ಗ್ರಂಥ
ಕೇಂದ್ರ ಸಾಹಿತ್ಯ ಆಕಾಡೆಮಿ "ಫಲೋಶಿಪ್"
1991- ಶ್ರೀಹರಿ ಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ
ಕೃತಿಗಳು : ಹಣತೆ, ಮಾಂದಳಿರು, ಗಣೇಶ ದರ್ಶನ, ಅತಿಥಿ, ಶ್ರೀಹರಿ ಚರಿತೆ, ಅಹಲ್ಯೆ, ಶಬರಿ, ಸತ್ಯಾಯನ ಹರಿಶ್ಚಂದ್ರ, ಗೋಕುಲನಿರ್ಗಮನ, ಹಂಸದಮಯಂತಿ ಮತ್ತು ಇತರ ರೂಪಕಗಳು , ರಥ ಸಪ್ತಮಿ, ಹರಿಚರಿತ, ರಸಸಮೀಕ್ಷೆ ಸಿರಿಬಾಯಿ ನುಡಿ, ಕನ್ನಡ ಭಗವದ್ಗೀತೆ, ಮಹಾಪ್ರಸ್ಥಾನ, ಗಯಟೆ ಕವಿಯ ಫಾಸ್ಟ್.
ಕೆ.ಎಸ್. ನರಸಿಂಹಸ್ವಾಮಿ
ಜನನ :1915 ಜನವರಿ 26, ಮಂಡ್ಯಜಿಲ್ಲೆಯ ಕಿಕ್ಕೇರಿ
ನಿಧನ : 2004
ಶಿಕ್ಷಣ : ಪ್ರೌಢಶಾಲೆ , ಇಂಟರ್ ಮೀಡಿಯೇಟ್ ಮೈಸೂರಿನಲ್ಲಿ.
1977 ರಲ್ಲಿ ತೆರೆದ ಬಾಗಿಲು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
1987 ರಲ್ಲಿ ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ .
1992 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್
1995 "ದುಂಡು ಮಲ್ಲಿಗೆ" ಕವನ ಸಂಗ್ರಹಕ್ಕೆ ಪಂಪ ಪ್ರಶಸ್ತಿ ,
1996 ರಲ್ಲಿ ಮಾಸ್ತಿ ಸಾಹಿತ್ಯ ಪ್ರಶಸ್ತಿ .
ಕೃತಿಗಳು : ಮೈಸೂರು ಮಲ್ಲಿಗೆ, ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ, ಮಲ್ಲಿಗೆಯ ಮಾಲೆ(ಸಮಗ್ರ ಕವಿತೆಗಳು) ಇತ್ಯಾದಿ.
ವಿನಾಯಕ ಕೃಷ್ಣ ಗೋಕಾಕ್
ಜೀವನಪಥ 
ಜನನ 1909 ಆಗಸ್ಟ್9
ಮರಣ : 1992
1960 - ಪದ್ಮಶ್ರೀ ಪ್ರಶಸ್ತಿ
1982- ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು
1991- ಜ್ಞಾನಪೀಠ ಪ್ರಶಸ್ತಿ
ಸಾಹಿತ್ಯ ಪಥ :ಧ್ಯಾವಾ ಪೃಥವೀ, ಕಲೋಪಾಸಕ, ಸಮರಸವೇ ಜೀವನ, ಸಮುದ್ರದಾಚೆಯಿಂದ.


ದೇ. ಜವರೇಗೌಡ
ಜನನ :6 ಜುಲೈ, 1918, ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಚಕ್ಕೆರೆ.
ಶಿಕ್ಷಣ : ಚನ್ನಪಟ್ಟಣ, ಬೆಂಗಳೂರು, ಮೈಸೂರುಗಳಲ್ಲಿ ಶಾಲಾ ಕಾಲೇಜು ವಿದ್ಯಾಭ್ಯಾಸ.
1941 ಮಹಾರಾಜಾ ಕಾಲೇಜು, ಬಿ.ಎ. ಅನರ್ಸ್,
1943 ಎಂ.ಎ., 1946ರಲ್ಲಿ ಮೈ.ವಿ.ವಿ.ದಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಪ್ರಾರಂಭ.
1996 ಕನ್ನಡ ಅಧ್ಯಯನ ಸಂಸ್ಥೆಯ ಪ್ರಥಮ ಸಂಸ್ಥಾಪಕ ಸಿರ್ದೇಶಕರು.
 1965-75 ಮೈಸೂರು ವಿ.ವಿ.ದ ಕುಲಪತಿ.

ಡಾ|| ಯು.ಆರ್. ಅನಂತಮೂರ್ತಿ
ಜೀವನಪಥ
ಜನನ:21.12.1932 ತೀರ್ಥಹಳ್ಳಿ ತಾಲ್ಲೂಕು ಮೇಳಿಗೆಹಳ್ಳಿ
ವೃತ್ತಿ-ಗೌರವ : ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ, ಕೇರಳ ವಿಶ್ವವಿದ್ಯಾಲಯದ ಕುಲಪತಿ
1994- "ಜ್ಞಾನಪೀಠ" ಪ್ರಶಸ್ತಿ ( ಸಮಗ್ರಕಾವ್ಯ )
1970 - "ಸಂಸ್ಕಾರ" ಚಲನಚಿತ್ರವಾಗಿದೆ
1995 - ಶಾಂತಿ ಭಾರತಿ ದಿ.ಲಿಟ್ ಗೌರವ, ಶಿಖರ ಸನ್ಮಾನ ಪ್ರಶಸ್ತಿ
1998- ಪದ್ಮಭೂಷಣ ಪ್ರಶಸ್ತಿ
ಕೃತಿಗಳು : ಅವಸ್ಥೆ, ಭಾರತೀಪುರ, ಸಂಸ್ಕಾರ, ಆಕಾಶ ಮತ್ತು ಬೆಕ್ಕು, ಎಂದೆಂದೂ ಮುಗಿಯದ ಕತೆ, ಪ್ರಶ್ನೆ, ಸನ್ನಿವೇಶ, ಸಮಕ್ಷಮ ಆವಾಹನೆ.

ಜಿ.ಎಸ್. ಶಿವರುದ್ರಪ್ಪ
ಜನನ :1923 ಫೆಬ್ರವರಿ7 ಶಿವಮೂಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ.
ಶಿಕ್ಷಣ:ಮೈಸೂರುವಿಶ್ವವಿದ್ಯಾಲಯದಲ್ಲಿ
 1949 ರಲ್ಲಿ ಬಿ.ಎ. ಆನರ್‍ಸ್ ಮತ್ತು 1953 ರಲ್ಲಿ ಕನ್ನಡ ಎಂ.ಎ.
 ‘ಸೌಂದರ್‍ಯ ಸಮೀಕ್ಷೆ’ ಪ್ರೌಢ ಪ್ರಬಂಧಕ್ಕೆ 1960 ರಲ್ಲಿ ಪಿ.ಎಚ್.ಡಿ.,
 1970 ರಿಂದ 1986  ರವರೆಗೆ ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು ಮತ್ತು ನಿರ್ದೇಶಕರು.
1974 , ‘ಮಾಸ್ಕೋದಲ್ಲಿ 22 ದಿನ’ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ.
1982 ರಲ್ಲಿ ರಾಜ್ಯ ಸಾಹಿತ್ಯ ಅಕಾಡಿಮಿ ಪುರಸ್ಕಾರ.
1984 ರಲ್ಲಿ ‘ಕಾವ್ಯಾರ್ಥ ಚಿಂತನ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
 1987  ರಲ್ಲಿಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ ಮಾನ್ಯತೆ.
1992 ರಲ್ಲಿ ದಾವಣಗೆರೆಯಲ್ಲಿ ನಡೆದ 61 ನೆಯ ಅ,ಭಾ. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ.
1994-95 ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರು.
1997  ಪಂಪ ಪ್ರಶಸ್ತಿ ಗೌರವ
ಕೃತಿಗಳು : ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ತೀರ್ಥವಾಣಿ, ಕಾರ್ತೀಕ, ದೀಪದ ಹೆಜ್ಜೆ, ಅನಾವರಣ, ತೆರೆದ ದಾರಿ, ಮಾಸ್ಕೋದಲ್ಲಿ22 ದಿನ, ಗಂಗೆಯ ಶಿಖರಗಳಲ್ಲಿ, ಅಮೆರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ, ವಿಮರ್ಶೆಯ ಪೂರ್ವಪಶ್ಚಿಮ, ಪರಿಶೀಲನ, ಗತಿಬಿಂಬ, ಪ್ರತಿಕ್ರಿತೆ, ನವೋದಯ, ಕನ್ನಡ ಸಾಹಿತ್ಯ ಸಮೀಕ್ಷೆ, ಅನುರಣನ, ಇತ್ಯಾದಿ.

ಡಾ|| ಗಿರೀಶ್ ಕಾರ್ನಾಡ್ 
1934: ಮೇ 19 ರಂದು ಜನನ
1963-70 : ಉಪವ್ಯವಸ್ಥಾಪಕರು, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ಮದರಾಸು,
1972 :ಕಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ
1992: ಭಾರತ ಸರ್ಕಾರದಿಂದ "ಪದ್ಮಭೂಷಣ"
1998: ಜ್ಞಾನಪೀಠ ಪ್ರಶಸ್ತಿ
"ಯುಯಾತಿ" ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ
ಇವರ ನಿರ್ದೇಶನದ "ವಂಶವೃಕ್ಷ / ತಬ್ಬಲಿಯು ನೀನಾದೆ" ಮಗನೆಚಲನಚಿತ್ರಗಳಿಗೆ ಭಾರತ ಸರ್ಕಾರದ "ರಜತ ಕಮಲ" ಪ್ರಶಸ್ತಿ
ತಾವೇ ನಿರ್ದೇಶಿಸಿದ "ಉತ್ಸವ್" ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ
ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
"ತಲೆದಂಡ"ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
ಕೆಲವು ಪ್ರಮುಖ ಕೃತಿಗಳು : 
ನಾಟಕಗಳು : ಯಯಾತಿ, ಟಿಪ್ಪುಸುಲ್ತಾನ್, ತುಘಲಕ್ , ಹಯವದನ, ನಾಗಮಂಡಲ, ತಲೆದಂಡ, ಅಂಜುಮಲ್ಲಿಗೆ, ಹಿಟ್ಟಿಯ ಹುಂಜ, ಅಗ್ನಿ ಮತ್ತು ಮಳೆ (ಇಂಗ್ಲೀಷ್‌ಗೆ ಭಾಷಾಂತರ ಮತ್ತು ನಾಟಕ ಪ್ರದರ್ಶನ)
ಚಲನಚಿತ್ರಗಳ ನಿರ್ದೇಶನ : ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಉತ್ಸವ್
ಸಾಕ್ಷ ಚಿತ್ರಗಳ ನಿರ್ಮಾಣ : ಕನಕಪುರಂದರ, ದ.ರಾ.ಬೇಂದ್ರೆ, ಸೂಫಿ ಪಂಥ ಮುಂತಾದವು.

ಚಿನ್ನವೀರ ಕಣವಿ
ಜನನ : 1928 ಜೂನ್ 28 ಧಾರವಾಡ ಜಿಲ್ಲೆಯ ಹೂಂಬಳದಲ್ಲಿ.
ಶಿಕ್ಷಣ:1956 ರಲ್ಲಿ ಪ್ರಸಾರಾಂಗದ ನಿರ್ದೇಶಕರಾಗಿ ನೇಮಕ.
1981 ರಲ್ಲಿ ‘ಜೀವದ್ವನಿ’ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1985 ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ.
1989  ಕರ್ನಾಟಕ ರಾಜ್ಯ ಪ್ರಶಸ್ತಿ.
1999 ರಲ್ಲಿ "ಪಂಪ" ಪ್ರಶಸ್ತಿ
ಕೃತಿಗಳು : ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ದೀಪದಾರಿ, ಮಣ್ಣಿನ ಎಲ್. ಬಸವರಾಜು


ಡಾ|| ಎಂ.ಗೋಪಾಲಕೃಷ್ಣ ಅಡಿಗ
ಜನನ 18 .02..1918 ದ.ಕ.ಜಿಲ್ಲೆಯಮೋಗೇರಿ
ಮರಣ: 14.11.1992
ವೃತ್ತಿ -ಗೌರವ :1975  ಸಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ರೀಸರ್ಚ್ ಫಲೋ ನ್ಯಾಷನಲ್ ಬುಕ್ ಟ್ರಸ್ಟ್ ಡೈರೆಕ್ಟರ್ "ಸಾಕ್ಷಿ" ತ್ರೈಮಾಸಿಕ ಸಂಪಾದಕರು
1974 - "ವರ್ಧಮಾನ" ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ "ಸಮಗ್ರಗದ್ಯ" ಕೃತಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ
1973 - ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸಾಹಿತ್ಯಪಥ
ಕೃತಿಗಳು : ಮಹರ್ಷಿ ಅರವಿಂದ ಘೋಷ್, ಉಪನಿಷದ್ರಹಸ್ಯ, ಕಣ್ಮರೆಯಾದ ಕನ್ನಡ, ಕನ್ನಡ ನುಡಿಯ ಜೀವಾಳ, ಕರ್ನಾಟಕದ ವೀರಕ್ಷತ್ರಿಯರು, ಕರ್ಣನ ಮೂರು ಚಿತ್ರಗಳು ಋಗ್ವೇದಸಾರ, ಮಾನವಧರ್ಮದ ಆಕೃತಿ, ಶ್ರೀಮದ್ ಭಗವದ್ಗೀತೆ.
ಕಯ್ಯಾರ ಕಿಞ್ಞಣ್ಣರೈ
ಜನನ : 08.09.1915 ಕಾಸರಗೋಡು ಜಿಲ್ಲೆಯ ಪೆರಡಾಲ
ವೃತ್ತಿ-ಗೌರವ : 1969, ಆದರ್ಶಶಿಕ್ಷಕ ಕೇಂದ್ರ ಸರ್ಕಾರದಿಂದ ಪ್ರಶಸ್ತಿ, ಮದ್ರಾಸ್, ಕೇರಳ, ಆಕಾಡಮಿಗಳಿಂದ ಪ್ರಶಸ್ತಿ
1915 ರಾಜ್ಯೋತ್ಸವ ಪ್ರಶಸ್ತಿ
1969  ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
1989 ಅಖಿಲ ಭಾರತ ತುಳು ಸಮ್ಮೇಳನದ ಸನ್ಮಾನ ಪ್ರಶಸ್ತಿ
ಕೃತಿಗಳು : ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ ಮಕ್ಕಳ ಪದ್ಯಮಂಜರಿ, ವಿರಾಗಿಣಿ, ಅನ್ನದೇವರು, ರತ್ನರಾಶಿ, ಪರಶುರಾಮ, ಕವಿಗೋವಿಂದ ಪೈಸ್ಮೃತಿ - ಕೃತಿ, ವ್ಯಾಕರಣ ಮತ್ತು ಪ್ರಬಂಧ, ತಮಾನದಗಾನ, , ಸಾಹಿತ್ಯದೃಷ್ಟಿ.
ಹುಯಿಲಗೋಳನಾರಾಯಣರಾವ್( 1884-1971 )
ನಾಟಕಕಾರರಾಗಿ ಹೆಸರು ಮಾಡಿದವರು ಹುಯಿಲಗೋಳ ನಾರಾಯಣರಾಯರು. 04/10/1884 ರಲ್ಲಿ ಜನಿಸಿದರು.
ಇವರ ವಿದ್ಯಾಭ್ಯಾಸ ಗದಗ, ಪುಣೆ ಮತ್ತು ಮುಂಬಯಿಗಳಲ್ಲಿ ಗದುಗಿನಲ್ಲಿ ವಕೀಲಿ ವೃತ್ತಿ ಆರಂಭ.
 1954 ರಲ್ಲಿ "ಪತಿತೋದ್ಧಾರ" ನಾಟಕಕ್ಕೆ ಮುಂಬೈ ಸರ್ಕಾರದ ಬಹುಮಾನ.
1956 ರಲ್ಲಿ ಕರ್ನಾಟಕ ಸರ್ಕಾರ ಗೌರವಿಸಿದೆ.
"ಗದುಗಿನ ವೀರನಾರಾಯಣನ ಸೇವಕ" ಇವರ ಅಂಕಿತನಾಮ.
1924 ರಲ್ಲಿ ಬೆಳಗಾವಿ ಜಿಲ್ಲೆ ಟಿಳಕವಾಡಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಇವರು ಬರೆದ ಉದಯವಾಗಲಿ ನಮ್ಮ ಚಲುವಕನ್ನಡ ನಾಡು, ಎಂಬ ಸ್ವಾಗತಗೀತೆ ಸಭೆಯ ಗಮನ ಸೆಳೆಯಿತು. 1971 ರಲ್ಲಿ ಮರಣ ಹೊಂದಿದರು.
ಕೃತಿಗಳು : ವಜ್ರ ಮುಕುಟ, ಕುಮಾರ ರಾಮ ಚರಿತೆ, ವಿದ್ಯಾರಣ್ಯ, ಭಾರತ ಸಂಧಾನ ಉತ್ತರ ಗೋಗ್ರಹಣ ಪತಿತೋದ್ಧಾರ ಇತ್ಯಾದಿ.
ಜಯಚಾಮರಾಜ ಒಡೆಯರ್
ಜನನ:18  ಜುಲೈ1919
ತಂದೆ: ಕಂಠೀರವ ನರಸರಾಜ ಒಡೆಯರ್,ತಾಯಿ:ಕೆಂಪು ಚೆಲುವಾಜಮಣಿ,
 ಶಿಕ್ಷಣ: ಮೈಸೂರಿನ ಮಹರಾಜ ಕಾಲೇಜಿನಲ್ಲಿ ಬಿ.ಎ.ಪದವಿ.
ಕೃತಿಗಳು: ದತ್ತಾತ್ರೇಯ_ ದಿ ವೇ ಅಂಡ್ ದಿ ಗೋಲ್,ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್,ಭಾರತೀಯ ಸೌಂದರ್ಯ,ಹಲವು ಮುಖಂಗಳು,ದಿ ರಿಲಿಜನ್ ಅಂಡ್ ದಿ ಮ್ಯಾನ್...
ಪ್ರಶಸ್ತಿ: ಗೌರವ ಡಾಕ್ಟರ್ ಆಫ ಲಾಸ್ ಪ್ರಶಸ್ತಿ. ಸೇವೆ: ಮದ್ರಾಸ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.

ಸೇಡಿಯಾಪು ಕೃಷ್ಣಭಟ್ಟ
ಜನನ:08/06/1902 ಪುತ್ತೂರು ತಾಲ್ಲೂಕಿನ ಸೇಡಿಯಾಪು
ನಿಧನ :08/06/1996
ಶಿಕ್ಷಣ : ವಿದ್ವಾನ್ ಪರೀಕ್ಷೆ, ಸೇಂಟ್ ಎಲೋಷಿಯಸ್ ನಲ್ಲಿ ಅಧ್ಯಾಪಕ ವೃತ್ತಿಆರಂಭ ಕಾಲೇಜಿನಲ್ಲಿ ಅಧ್ಯಾಪಕರು,
 1917 ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ . ರಾಜ್ಯೋತ್ಸವ ಪ್ರಶಸ್ತಿ .
1994 ಪಂಪ ಪ್ರಶಸ್ತಿ (ಮರಣೋತ್ತರ)
ಕೃತಿಗಳು : ವಿಚಾರ ಪ್ರಪಂಚ, ಕೆಲವು ದೇಶ ನಾಮಗಳು, ಕನ್ನಡ ವರ್ಣಗಳು, ಪಳಮೆಗಳು, ಕೆಲವು ಸಣ್ಣ ಕಾವ್ಯಗಳು, ಚಂದ್ರಖಂಡ ಮತ್ತಿತರ ಕವಿತೆಗಳು, ಕನ್ನಡ ನಿಘಂಟು, ಛಂದೋಗತಿ, ಕನ್ನಡ ಛಂದಸ್ಸು, ಇತ್ಯಾದಿ.
ದೇವುಡು ನರಸಿಂಹಶಾಸ್ತ್ರಿ
ಜನನ : 23/12/1897
ತಂದೆ : ದೇವುಡ ಕೃಷ್ಣಶಾಸ್ತ್ರಿ.
ತಾಯಿ : ಸುಬ್ಬಮ್ಮ,
ಕೃತಿಗಳು :ಮಹಾದರ್ಶನ, ಎರಡನೇ ಜನ್ಮ, ಕರ್ನಾಟಕ ಸಂಸ್ಕೃತಿಯ ದರ್ಶನ, ಮಯೂರ, ಕಳ್ಳಕ ಕೂಟ, ಮೀಮಾಂಸಾದರ್ಪಣಾ, ಬುದ್ದಿಯ ಕಥೆಗಳು, ಕಂದನ ಕತೆಗಳು, ಕನ್ನಡಿಯ ಕಥೆ, ಚಾಮುಂಡೇಶ್ವರಿ ಮತ್ತು ಇತರೆ ಕಥೆಗಳು ,
ಪ್ರಶಸ್ತಿ : ಕೇಂದ್ರ ಸಾಹಿತ್ಯ ಅಕಾಡೆಮಿ,
ಸೇವೆ : ಆರ್ಯ ವಿಶ್ವವಿದ್ಯಾಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಚಂದ್ರಶೇಖರ ಕಂಬಾರ
ಜನನ : 1937  ಜನವರಿ2  ಬೆಳಗಾಂ ಜಿಲ್ಲೆಯ ಘೋಡಗೇರಿ.
ಶಿಕ್ಷಣ : ಎಂ.ಎ., ಪಿ.ಎಚ್.ಡಿ., ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಅಧ್ಯಾಪನ : 1968 ರಿಂದ 1969 ರ ವರೆಗೆ ಚಿಕಾಗೊ ವಿಶ್ವವಿದ್ಯಾಲಯ, ಅಮೆರಿಕಾ.
1970  ರಿಂದ1991 ರ ವರೆಗೆ ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 1982 ರಲ್ಲಿ ‘ಸಾವಿರದ ನೆರಳು’ ಕವನ ಸಮಕಲನಕ್ಕೆ ‘ಆಶಾನ್’ ಪ್ರಶಸ್ತಿ (ಕೇರಳ).
1991  ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ‘ಸಿರಿಸಂಪಿಗೆ’ ಕೃತಿಗೆ
1981 ರಲ್ಲಿ ಇವರ ‘ಸಂಗೀತಾ’ ಚಲನಚಿತ್ರಕ್ಕೆ ತೃತೀಯ ಅತ್ಯುತ್ತಮ ಚಲನಚಿತ್ರವೆಂದು ರಾಜ್ಯ ಪ್ರಶಸ್ತಿ. 2003 ರಲ್ಲಿ ಪಂಪ ಪ್ರಶಸ್ತಿ.
ಕೃತಿಗಳು : ಹೇಳತೇನ ಕೇಳ, ಕರಿಮಾಯಿ, ಜಿ.ಕೆ ಮಾಸ್ತರ ಪ್ರಣಯ ಪ್ರಸಂಗ (1983 ) ಸಿಂಗಾgವ್ವ ಮತ್ತು ಅರಮನೆ, ಸಂಶೋಧನೆ : ಬಣ್ಣೀಸಿ ಹಾಡವ್ವ ನನ್ನ ಬಳಗ, ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಬಯಲಾಟಗಳು (1974 ) ಸಂಗ್ಯಾಬಾಳ್ಯ (1966) ಲಕ್ಷಾಪತಿ ರಾಜನಕಥೆ, ಮಾತಾಡೊ ಲಿಂಗವೆ, ಬೇಡರ ಹುಡುಗ ಮತ್ತು ಗಿಳಿ, ಕಾಸಿಗೊಂದು ಸೇರು, ನಮ್ಮ ಜಾನಪದ (1980), ಕನ್ನಡ ಜಾನಪದ ವಿಶ್ವಕೋಶ, ಇತ್ಯಾದಿ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಜನನ : 8-9-1938, ಶಿವಮೊಗ್ಗ ಜಿಲ್ಲೆಯ ಕುಪ್ಪಳಿ.
ಶಿಕ್ಷಣ : ಕನ್ನಡ ಬಿ.ಎ. ಅನರ್‍ಸ್, ಎಂ.ಎ. ಮಾಹಾರಾಹಾ ಕಾಲೇಜು ಮೈಸೂರು,
 1973 ರಲ್ಲಿ ‘ಅಬಚೂರಿನ ಪೋಸ್ಟಾಫೀಸು’ ಚಲನಚಿತ್ರ ಪ್ರಾಂತೀಯ ಶ್ರೇಷ್ಠ ಚಿತ್ರ ಪುರಸ್ಕಾರ.
1986 ರಲ್ಲಿ ‘ತಬರನ ಕಥೆ’ ಚಿತ್ರಕ್ಕೆ ರಾಷ್ಟ್ರಮಟ್ಟದ ಸ್ವರ್ಣಕಮಲ ಪ್ರಶಸ್ತಿ.
1985 ಚಿದಂಬರ ರಹಸ್ಯಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ.
2001ಪಂಪ ಪ್ರಶಸ್ತಿ.
ಕೃತಿಗಳು : ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫೀಸು, ಕರಗೂರಿನ ಗಯ್ಯಾಳಿಗಳು, ಕರ್ವಾಲೊ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್, ಪರಿಸರದ ಕತೆ, ಏರೋಪ್ಲೇನ್ ಚಿಟ್ಟೆ ಮತ್ತು ಇರತ ಕಥೆಗಳು, ಇತ್ಯಾದಿ
ಕೆ.ಜಿ ಕುಂದಣಗಾರ
ಜೀವನಪಥ
ಜನನ: 14.08.1895 ಗೋಕಾಕ್ ತಾಲ್ಲೂಕು ಕೌಜಲಗಿ
ಮರಣ : 22.08.1995
ಕಾವ್ಯನಾಮ : ಕೇಶವ
ವೃತ್ತಿ-ಗೌರವ : ಧಾರವಾಡದಲ್ಲಿ "ವಾಗ್ಬೂಷಣಂ" ಬೆಳಗಾವಿಯಲ್ಲಿ "ಜಿನವಿಜಯ" ಪತ್ರಿಕೆಗಳ ಸಂಪಾದಕತ್ವ
ಕ.ಸಾ.ಪ. ಪ್ರಕಟಿಸಿದ ಕನ್ನಡ - ಕನ್ನಡ ನಿಘಂಟಿನ ಸಂಪಾದಕ ಸಮಿತಿ ಸದಸ್ಯ
1961 - "ಕುಂದಣ" ಗ್ರಂಥ ಅರ್ಪಣೆ
ಕೃತಿಗಳು : ಸರಸ್ವತಿ, ಮಹಾದೇವಿಯಕ್ಕ, ಲೀಲಾವತಿ ಪ್ರಬಂಧ,
ಹರಿಹರದೇವ ಪ್ರಶಸ್ತಿ ಪೂರ್ವಪುರಾಣ, ಆದಿಪುರಾನ, ಕುಮುದೇಂದು ರಾಮಾಯಣ
ಇಂಗ್ಲೀಷಿನಲ್ಲಿ : ನೋಟ್ಸ್ ಆನ್ ದಿ ಮಹಾಲಕ್ಷ್ಮಿ ಟೆಂಪಲ್
ಎಂ. ಚಿದಾನಂದಮೂರ್ತಿ
ಜನನ : 10/05/1931 ಶಿವಮೊಗ್ಗ ಜಿಲ್ಲೆ ಹೀರೇಕೋಗಲೂರು
ಶಿಕ್ಷಣ : ಸಂತೆಬೆನ್ನೂರು, ದಾವಣಗೆರೆ, ಮೈಸೂರುಗಳಲ್ಲಿ, ಮಹಾರಾಜ ಕಾಲೇಜಿನಿಂದ ಬಿ.ಎ. ಅನರ್ಸ್ ಎಂ.ಎ., ಅಧ್ಯಾಪಕ, ಉಪ ಪ್ರಾಧ್ಯಾಪಕರು.
ಬೆಂ.ವಿ.ವಿ. ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕರಾಗಿ ಸ್ವಯಂ ನಿವೃತ್ತಿ (1990), 1984ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1985ರಲ್ಲಿ ರಜ್ಯೋತ್ಸವ ಪ್ರಶಸ್ತಿ. ಇತರ ಹಲವು ಪ್ರಶಸ್ತಿ.
1997 ರಲ್ಲಿ ಕೇಂದ್ರ ಸಾ.ಅ. ಪ್ರಶಸ್ತಿ ‘ಹೊಸತು ಹೊಸತು’ ಕೃತಿಗೆ. 2002 ರಲ್ಲಿ ಪಂಪ ಪ್ರಶಸ್ತಿ.
ಇತರ ಹಲವು ಪ್ರಶಸ್ತಿಗಳು.
ಕೃತಿಗಳು : ಶೂನ್ಯ ಸಂಪಾದನೆಯನ್ನು ಕುರಿತು, ಭಾಷಾ ವಿಜ್ಞಾನದ ಮೂಲತತ್ವಗಳು, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಂಶೋಧನ ತರಂಗ (ಸಂ. 1,2), ಸಂಶೋಧನ, ಶಾಸನ ಪದ್ಯಮಂಜರಿ, ವಚನ ಚಾಹಿತ್ಯ, ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳು, ಗ್ರಾಮೀಣ, ಅಧ್ಯಯನ, ವಾಗರ್ಥ, ಇತ್ಯಾದಿ.
ಡಾ|| ಎಸ್.ಎಲ್.ಬೈರಪ್ಪ
ಜನನ:26.07.1934ಹಾಸನಜಿಲ್ಲೆಸಂತೇಶಿವರ
ತಂದೆ-ತಾಯಿ : ಲಿಂಗಣ್ಣಯ್ಯ, ಗೌರಮ್ಮ
ವೃತ್ತಿ-ಗೌರವ : ತತ್ವಶಾಸ್ತ್ರದಲ್ಲಿ ಎಂ.ಎ ಮತ್ತು ಪಿ.ಎಚ್.ಡಿ ಪದವಿ
1966 ವಂಶವೃಕ್ಷ ಕಾದಂಬರಿಗೆ ರಾಜ್ಯಸಾಹಿತ್ಯ ಆಕಾಡೆಮಿ ಪ್ರಶಸ್ತಿ
1975 ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
1986 ವರ್ಷದ ಲೇಖಕ ಪ್ರಶಸ್ತಿ
1985ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಕಲ್ಕತ್ತೆಯ ಭಾರತೀಯ ಭಾಷಾ ಪ್ರಶಸ್ತಿ
"ಭೈರಪ್ಪಾಭಿನಂದನ", "ಸಹಸ್ಪಂದನ" ಅಭಿನಂದನಾಗ್ರಂಥ ಅರ್ಪಣೆ
ಕೃತಿಗಳು : ದಾಟು, ವಂಶವೃಕ್ಷ, ಪರ್ವ, ತಬ್ಬಲಿಯು ನೀನಾದೆ ಮಗನೆ, ಗ್ರಹಣ, ನಿರಾಕರಣ, ತಂತು, ಜಲಪಾತ, ಧರ್ಮಶ್ರೀ, ನೆಲೆ, ಅಂಚು, ಸಾರ್ಥ ಸಾಹಿತ್ಯ ಮತ್ತು ಪ್ರತೀಕ, ಸತ್ಯ ಮತ್ತು ಸೌಂಧರ್ಯ, ಮಂದ್ರ.
ಕಿ|| ಎಚ್.ಎಲ್. ನಾಗೇಗೌಡ 
ಜನನ : 07/12/1915, ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ
ವೃತ್ತಿ-ಗೌರವ : ಜಾನಪದ ಗಾಯಕರ ದ್ವನಿಮುದ್ರಣ ಕರ್ನಾಟಕ ಜಾನಪದ ಪರಂಪರೆಯನ್ನು ಬಿಂಬಿಸುವ ವಿಡಿಯೋ ಚಿತ್ರೀಕರಣ
1974- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
"ಜಾನಪದ ಜಗತ್ತು ಜಾನಪದ ಪತ್ರಿಕೆಯ ಸಂಪಾದಕರು ಜಾನಪದ ಲೋಕ (ರಾಮನಗರಬಳಿ) ವಸ್ತು ಸಂಗ್ರಹಾಲಯ ಸ್ಥಾಪನೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ವಿಧಾನಪರಿಷತ್ತಿನ ಸದಸ್ಯತ್ವ.
ಕೃತಿಗಳು : ನಾನಾಗುವೆ ಗೀಜಗನ ಹಕ್ಕಿ , ಕೆನಿಲ್ ವರ್ತ, ಪ್ರವಾಸಿಕಂಡ ಇಂಡಿಯಾ , ಸೋಬಾನೆ ಚಿಕ್ಕಮ್ಮನ ಪದಗಳು, ಹೆಳವರು ಮತ್ತು ಅವರ ಕಾವ್ಯಗಳು, ಕರ್ನಾಟಕ ಜಾನಪದ ಕತೆಗಳು.
ನಿರಂಜನ್
ಜನನ : 5/06/1924ರಂದು ಕುಳಕುಂದ,
ತಂದೆ : ಶ್ರೀನಿವಾಸ ರಾಯರು.
ತಾಯಿ : ಚೆನ್ನಮ್ಮ
ಕೃತಿಗಳು ; ಪ್ರಥಮ ಕಥಾ ಸಂಗ್ರಹ, (ಐ.ಎನ್.ಎ) ರಕ್ತ ಸಂಗ್ರಹ ಸರೋವರ, ಅನ್ನಪೂರ್ಣ, ಕೊನೆಯ ಗಿರಾಕಿ, ವಾರದ ಹುಡುಗ, ಕಾತ್ಯಾಯಿನಿ, ಒಂಟ ನಕ್ಷತ್ರನ್ಕಿಡು, ಯಾವ ಜನ್ಮದ ಶಾಪ, ನಾಸ್ತಿಕ ಕೊಟ್ಟ ದೇವರು , ಕಾದಂಬರಿ:ಬನಶಂಕರಿ, ಸೌಭಾಗ್ಯ, ಅಭಶ್ರ್ಯ ರಂಗಮ್ಮನ ವಠಾರ, ದೂರು ನಕ್ಷತ್ರ, ನವೋದಯ, ಪಾಲಿಗೆ ಬಂದ ಪಂಚಾಮೃತ, ಏಕಾಂಗಿನಿ, ಚಿರಸ್ಮರಣೆ, ಕೊನೆಯ ನಮಸ್ಕಾರ, ದೀಕ್ಷೆ ಕಲ್ಯಾಣ ಸ್ವಾಮಿ, ಮಿಣುಕುಹುಳು ವಿಲಾಸಿನಿ.
ಪ್ರಶಸ್ತಿ : ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಅಕಾಡೆಮಿ.
ಹಂಪ ನಾಗರಾಜಯ್ಯ
ಜನನ: 18ನೇ ಜುಲೈ 1936  ರಂದು ಹಂಪ ಸಂದ್ರದಲ್ಲಿ.
 ಶಿಕ್ಷಣ: ಮಂಡ್ಯ, ಮೈಸೂರು, ತುಮಕೂರಿನಲ್ಲಿ ಬಿ. ಎ. ಪದವಿ ಹಾಗೂ ಎಂ.ಎ. ಪದವಿ.
ಕೃತಿಗಳು: ಭಾಷೆ, ಸಿ.ವಿ. ರಾಮನ್, ವಡ್ಡಾರಾಧನೆ, ಆಕಾಶ ಜಾನಪದ, ನಾಗಶ್ರೀ, ದ್ರಾವಿಡ ಭಾಷಾ ವಿಜ್ಞಾನ, ಸಾಳ್ವ ಭಾರತ, ಧನ್ಯಕುಮಾರ ಚರಿತ್ರ, ನಾಗಕುಮಾರ ಷಟ್ಪದಿ, ರತ್ನಾಕರ ಹಾಡುಗಳು. ಶಾಂತಿನಾಥ ಪುರಾಣ, ಅಪ್ರತೀಮ ವೀರಚರಿತ್ರೆ, ಸವ್ಯಸಾಚಿ, ಪಂಪ, ಗೋವಿಂದ ಪೈ ಬದುಕು-ಬರಹ ಸಮ್ಮೇಳನಾಧ್ಯಕ್ಷರುಗಳು ಹೆಸರಿನ ಸೊಗಸು. ಪ್ರಶಸ್ತಿ: ದೇವರಾಜ ಬಹದ್ದೂರ್ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.ದೇವುಡು ನರಸಿಂಹಶಾಸ್ತ್ರಿ
ಜನನ : 23-12-1897
ಕೃತಿಗಳು: ಮಹಾದರ್ಶನ, ಎರಡನೇ ಜನ್ಮ, ಕರ್ನಾಟಕ ಸಂಸ್ಕೃತಿಯ ದರ್ಶನ, ಮಯೂರ, ಕಳ್ಳಕ ಕೂಟ, ಮೀಮಾಂಸಾದರ್ಪಣಾ, ಬುದ್ದಿಯ ಕಥೆಗಳು, ಕಂದನ ಕತೆಗಳು, ಕನ್ನಡಿಯ ಕಥೆ, ಚಾಮುಂಡೇಶ್ವರಿ ಮತ್ತು ಇತರೆ ಕಥೆಗಳು ,
 ಪ್ರಶಸ್ತಿ : ಕೇಂದ್ರ ಸಾಹಿತ್ಯ ಅಕಾಡೆಮಿ,
ಸೇವೆ : ಆರ್ಯ ವಿಶ್ವವಿದ್ಯಾಶಾಲೆಯಲ್ಲಿ ಶಿಕ್ಷಕರಾಗಿದ್ದರು.
ಡಿ.ವಿ.ಗುಂಡಪ್ಪ (1889-1922)
ಡಿವಿಜಿ ಎಂದೇ ಪ್ರಸಿದ್ಧರಾದವರು, ಪತ್ರಿಕೋದ್ಯಮಿಗಳೂ, ಸಾಹಿತಿಯೂ ಆಗಿ ಸೇವೆ ಸಲ್ಲಿಸಿದವರು. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ೧೮೮೯ರಲ್ಲಿ ಕಸಾಪದ ಪರಿಷತ್ವತ್ರಿಕೆ ಸಂಪಾದಕರು.
೧೯೦೭ರಲ್ಲಿ ಭಾರತಿ ದಿನಪತ್ರಿಕೆ ಪ್ರಾರಂಭ.
೧೯೪೫ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪ್ರಾರಂಭ.
 ೧೯೬೧ರಲ್ಲಿ ಮೈ.ವಿ.ವಿ ಯಿಂದ ಗೌರವ ಡಿ.ಲಿಟ್ .
೧೯೬೭ರಲ್ಲಿ "ಶ್ರೀಮದ್ ಭಗವದ್ಗೀತಾ ತಾತ್ಪರ್ಯ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ. 07.10.1972ರಲ್ಲಿ ನಿಧನ ಹೊಂದಿದರು.
ಕೃತಿಗಳು : ಉಮರನ ಬಸಗೆ, ಅಂತ:ಪುರ ಗೀತೆ, ಮಂಕುತಿಮ್ಮನ ಕಗ್ಗ, ಮ್ಯಾಕ್ ಬೆತ್ , ಜೀವನಧರ್ಮಯೋಗ , ಮರಳಮನಿಯನ ಕಗ್ಗ, ಜ್ಞಾಪಕ ಚಿತ್ರಶಾಲೆ ಇತ್ಯಾದಿ
ಡಾ|| ಎಂ. ಶಿವರಾಮ)
ಜನನ : 10.11.1905 ರಂದು ಬೆಂಗಳೂರು
ಕೃತಿಗಳು : ಮನ ಮಂತನ, ತುಟಿ ಮಿರಿದುದುದು, ಒಂದನೊಂದು ಕಾಲದಲ್ಲಿ, ಕಾರ್ತಿಕ ಸೊಮವಾರ, ಮನೋ ನಂದನ, ಬುದ್ದೊಜಿಯ ಕಥೆಗಳೂ, ಥಳುಕು ತುಣುಕು, ಜಗ್ಗೊಜಿ, ಮಧು ವಾನದಲ್ಲಿ ಮೆಳ, ಕೋರವಂಜಿಯ ಪಡುವಣ ಯಾತ್ರೆ, ಜೆ.ಪಿ.ರಾಜರತ್ನಂ, ನಮ್ಮ ಅತಿಗೆ ಪತ್ಯದ ಊಟಾ.
ಪ್ರಶಸ್ತಿ: ಕೇಂದ್ರ ಸಾಹಿತ್ಯ ಆಕಡೇಮಿ, ರಾಜ್ಯ ಸಾಹಿತ್ಯ ಅಕಾಡೆಮಿ.
ಸೇವೆ : ಕೊರವಂಜಿ ಪತ್ರಿಕೆಯ ಸಂಸ್ತಾಪಕ ಮತ್ತು ಸಂಪಾದಕರಾಗಿ ದುಡಿದರು.No comments:

Post a Comment