Monday, September 4, 2017

ಕನ್ನಡ ಜೋಕ್ಸ್,

ಡಾಮಾರು ಹಾಕುತ್ತಿರುವ ರಸ್ತೆಯಲ್ಲಿ ಬೇಕಾದರೂ ನಡೆಯಬಹುದು ಆದರೆ ಅಮ್ಮ ಈಗ ತಾನೇ ಸೆಗಣಿ ಸಾರಿಸಿದ ಅಂಗಳದಲ್ಲಿ ನಡೆದು ಹೋಗುವುದು ತುಂಬಾ ಕಷ್ಟ !

ಇತ್ತೇ ಅಡಿತ್ತಿನೀ ಆಯಗ್ ಆತ್ ಬೇಗ ಸನ್ನಿ ಮೀರುಂಡು😜😜😂

ಆಫೀಸರ್- ರಜೆ ಕೊಡೊಕೆ ಸಾಧ್ಯವಿಲ್ಲರಿ.
ಕ್ಲರ್ಕ್- ಸಾರ್, ನನ್ನ ಮದುವೆ ಸಾರ್, ರಜ ಕೊಡದೆ ಇದ್ದರೆ ಹೇಗೆ ಸಾರ್?
ಆಫೀಸರ್- ಮದುವೇನಾ? ನಿನ್ನನ್ನು ಮದುವೆ ಆಗೋಕೆ ಮುಂದೆ  ಬಂದಿರೊ ಮೂರ್ಖಳು ಯಾರಯ್ಯ?
ಕ್ಲರ್ಕ್- ನಿಮ್ಮ ಮಗಳೆ ಸಾರ್..😂😂


ಇತಿಹಾಸ ಮೇಸ್ಟ್ರು: ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ?
ಸಂತಾ: ಗೊತ್ತಿಲ್ಲ ಸಾರ್.
ಮೇಸ್ಟ್ರು: ಮೂರ್ಖನಿದ್ದೀಯ.. ಬೋರ್ಡಲ್ಲಿ ಬರೆದ್ರೂ ಓದಕ್ಕಾಗಲ್ವ?
ಸಂತಾ: ಅದು ಅವನ ಫೋನ್ ನಂಬರ್ ಅಂದ್ಕೊಂಡಿದ್ದೆ ಸಾರ್..!😜😅


ಟೀಚರ್ (ಸಿಟ್ಟಿನಿಂದ) : ಲೇ ಗುಂಡ, ನೀನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟು.
ಗುಂಡ (ಮನಸ್ಸಿನಲ್ಲೇ) : ನೀವು ಮುಂದಿನ ಜನ್ಮದಲ್ಲಿ ಲೈಟ್ ಕಂಬವಾಗಿ ಹುಟ್ಟಿ, ಆವಾಗ ನೋಡ್ಕೋತೀನಿ.😀😃😄

No comments:

Post a Comment