Friday, September 8, 2017

ಒಂದು ಸಣ್ಣ ಕಥೆ

ಒಂದು ಸಣ್ಣ ಕಥೆ

ಒಂದು ದಿನ ಹೊರಗೆ ಹೋಗಿ ಬಂದ ನನ್ನನ್ನು ಸ್ವಾಗತಿಸಿದ್ದು ಭಯಾನಕ ದೃಶ್ಯವಾಗಿತ್ತು ...
ಮನೆಯ ನಾಯಿಯ ಬಾಯಲ್ಲಿ ಪಕ್ಕದ ಮನೆಯ ಅಂಕಲ್ ಪ್ರೀತಿಯಿಂದ ಸಾಕಿದ್ದ ಮೊಲ.

ನಾಯಿಯ ಬಾಯಿಯಿಂದ ಮೊಲವನ್ನ ಹಿಡಿದೆಳೆದೆ. ಅದರ ವಿಚಾರದಲ್ಲಿ ಒಂದು ತೀರ್ಮಾನ ಅಂತೂ ಆಗಿತ್ತು. ಆ ಅಂಕಲ್ ತುಂಬಾ ಪ್ರೀತಿಸುವ ಮೊಲ ಅದು. ಅದನ್ನು ನಾಯಿ ಕಚ್ಚಿ ಕೊಲ್ಲಿತು  ಅಂತ ಗೊತಾದ್ರೆ ಅಂಕಲ್ ಜೊತೆಗಿನ ಸ್ನೇಹ ಮುಗುದೋಯಿತು ...

ಆ ಮನೆಯೆಡೆಗೆ ಮೆಲ್ಲ ಕತ್ತೆತ್ತಿ ನೋಡಿದೆ. ನನ್ನ ಭಾಗ್ಯ ಯಾರು ಇರ್ಲಿಲ್ಲ .

ಸತ್ತು ಬಿದ್ದಿದ್ದ ಮೊಲವನ್ನ ನಾನು ಕೈಯಲ್ಲಿ ಹಿಡ್ಕೊಂಡೆ. ಅದರ ದೇಹದಲ್ಲಿ ಹಿಡಿದಿದ್ದ ಮಣ್ಣು , ಒಣಗಿದ ರಕ್ತವನ್ನೆಲ್ಲ ತೊಳೆದು ನೀರೆಲ್ಲ ಉಜ್ಜಿ ತೆಗೆದೆ. ಫ್ಯಾನಿನಡಿಯಲ್ಲಿಟ್ಟು ನೀರಿನ ಅಂಶವೆಲ್ಲ ಒಣಗಿಸಿದೆ.

ಯಾರು ನೋಡದ ಸಮಯ ನೋಡಿ ಮೆಲ್ಲ ಕೊಂಡು ಹೋಗಿ ಅದನ್ನ ಅದರ ಗೂಡಲ್ಲಿ ಇಟ್ಟೆ. ಮೊಲದ ಮರಣ ಸ್ವಾಭಾವಿಕವಾಗಿರಲಿ ಎಂದು ಅವರು ತಿಳ್ಕೊಳ್ಳಲಿ ಎಂಬುದು ನನ್ನ ಉದ್ದೇಶ.

ತೊಂದರೆಯೊಂದು ಇಲ್ಲದೆ ಆ ದಿನ ಹಾಗೇ ಕಳೆದು ಹೋಯಿತು .

ಮರುದಿವಸ ನಾನು ಕೆಲಸ ಮುಗಿಸಿ ಬರುವಾಗ ಅಂಕಲ್ ಅವರ ಮನೆಯ ಗೇಟಿನ ಮುಂದೆ ನಿಂತಿದ್ರು . ತಪ್ಪು ಮಾಡಿದ ಪಶ್ಚಾತಾಪದಿಂದ ತಲೆತಗ್ಗಿಸಿ ಮೆಲ್ಲ ಮನೆಯೆಡೆಗೆ ನಡೆಯಲು ಹೊರಟ ನನ್ನನ್ನ ಅಂಕಲ್ ಕರೆದ್ರು .

" ಏನ್ ಅಂಕಲ್ ?"

" ನಿಂಗೊತ್ತಾಗಿಲ್ವಾ?"

"ಇಲ್ಲ. ಏನ್ ಅಂಕಲ್ ??"

"ನಮ್ಮ ಮೊಲ ಸತ್ತೋಯ್ತು"

"ಅಯ್ಯೋ .. ನಂಗೊತ್ತಾಗ್ಲಿಲ್ಲಾ ಅಂಕಲ್, ಏನಾಯ್ತು ?"

"ಅದರ ತಲೆಗೆ ತೆಂಗಿನಕಾಯಿ ಬಿತ್ತು.... "

"ಅಯ್ಯೋ .!!"

"ಪ್ರಾಬ್ಲಮ್  ಅದಲ್ಲ....

ನಿನ್ನೆ ಮೂರು ಗಂಟೆಗೆ ಆಗಿತ್ತು ಘಟನೆ ನಡೆದಿದ್ದು. ಅದನ್ನ ಮಣ್ಣು ಮಾಡಿಯೂ ಆಗಿತ್ತು. ನಾವೆಲ್ಲ ನಂತರ ಹೊರಗೆ ಹೋಗಿ ಬಂದು ನೋಡುವಾಗ , ಯಾರೋ ಆ ಮೊಲವನ್ನ ಹೊಂಡದಿಂದ ಹೊರತೆಗೆದು ಸಾನ್ನ ಮಾಡಿಸಿ ಪುನಃ ಗೂಡಲ್ಲಿ ತಂದಿಟ್ಟಿದ್ದಾರೆ ....!!!" 😂😂


                                                                                                                                         (ಸಂಗ್ರಹ )

No comments:

Post a Comment