Friday, September 15, 2017

" ಇನ್ನು ಸ್ವಲ್ಪ ದೂರ ಮಾತ್ರ "

ಒಂದು ರಶ್ ಆಗಿದ್ದ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳ ಹತ್ತಿರ ಕೈ ತುಂಬಾ ಬ್ಯಾಗುಗಳೊಂದಿಗೆ ವೃದ್ಧೆಯೊಬ್ಬಳು ಬಂದು ಕುಳಿತರು. ಆಕೆಯ ಬ್ಯಾಗುಗಳಿಂದಾಗಿ ಆ ಯುವತಿಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಆ ಯುವತಿಯ ಅವಸ್ಥೆಯನ್ನು ನೋಡಿದ ಪಕ್ಕದಲ್ಲಿ ನಿಂತಿದ್ದ ಒಬ್ಬಾತ ಆ ಯುವತಿಯಲ್ಲಿ ಕೇಳಿದ - ನೀವು ಯಾಕೆ ಪ್ರತಿಕ್ರಿಯಿಸುತ್ತಿಲ್ಲ ? ಆ ವೃದ್ಧೆಯಲ್ಲಿ ಬ್ಯಾಗುಗಳನ್ನು ಕೆಳಗಿಡಲು ಯಾಕೆ ಹೇಳುತ್ತಿಲ್ಲ ?

ಆಗ ಆಕೆ ಮುಗುಳ್ನಗುತ್ತಾ ಹೇಳುತ್ತಾಳೆ - ಇಷ್ಟು ಚಿಕ್ಕ ವಿಷಯಕ್ಕೆ ನಾನು ಯಾಕೆ ಪ್ರಾಧಾನ್ಯತೆ ಕೊಡಬೇಕು ?  ಆಕೆಯ ಜೊತೆ  ಚರ್ಚಿಸಬೇಕು, ನಂತರ ಜಗಳ, ನಂತರ ಕೋಪ , ಆಮೇಲೆ ದ್ವೇಷ ಹುಟ್ಟಿಕೊಳ್ಳುತ್ತದೆ. ಕೊನೆಗೆ ತಾಳ್ಮೆಯೇ ಕಳಕೊಳ್ಳುತ್ತದೆ. ನಾನು ನೆಕ್ಸ್ಟ್ ಸ್ಟಾಪಲ್ಲಿ ಇಳಿಯುತ್ತೇನೆ. ನಾವು ಒಟ್ಟಿಗೆ ಸಾಗುವ ಈ ಪ್ರಯಾಣವು
 "ಇನ್ನು ಸ್ವಲ್ಪ ದೂರ ಮಾತ್ರ" .....

ನಿಜವಾಗಿಯೂ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಒಂದು ದೊಡ್ಡ ಸಂದೇಶವನ್ನೇ ಆ ಯುವತಿ ಹೇಳಿರುವುದು.....!!

ನಾವು ಮಾಡುವ ಒಟ್ಟಿಗಿನ ಈ ಪ್ರಯಾಣವು " ಇನ್ನು ಸ್ವಲ್ಪ ದೂರ ಮಾತ್ರ " ಆದ್ದರಿಂದ ಒಂದು ತರ್ಕ ಅಥವಾ ಚರ್ಚೆಯ ಮತ್ತು ಒಂದು ಜಗಳದ ಅವಶ್ಯಕತೆ ಏನಿದೆ ಸ್ನೇಹಿತರೆ ?

ನಮ್ಮೆಲ್ಲರ ಈ ಜೀವನ ಎಷ್ಟೊಂದು ನಶ್ವರ ಮತ್ತು ಚಿಕ್ಕದಾಗಿದೆ....? ಜಗಳಗಳಿಂದಲೋ, ಅನಾವಶ್ಯಕವಾದ ತರ್ಕಗಳಿಂದಲೋ, ದ್ವೇಷಗಳಿಂದಲೋ, ಯಾರನ್ನೂ ಕ್ಷಮಿಸದೇ ಇರುವುದರಿಂದಲೋ ನಮ್ಮ ಬದುಕ್ಕನ್ನು ಇರುಳಾಗಿಸುವುದಕ್ಕಲ್ಲ ನಮ್ಮ ಜೀವನ.

ನಿಮ್ಮ ಹೃದಯವನ್ನು ಯಾರಾದರೂ ನೋಯಿಸಿದ್ದಾರಾ ? ಅವರನ್ನು ಕ್ಷಮಿಸಿ. ಯಾಕೆಂದರೆ, ಒಟ್ಟಿಗಿನ ಈ ಪ್ರಯಾಣ ಇನ್ನು ಸ್ವಲ್ಪ ದೂರ ಮಾತ್ರ.

ನಿಮ್ಮನ್ನು ಯಾರಾದರೂ ಅವಮಾನಿಸಿದರೇ ? , ನಿಮ್ಮನ್ನು ಯಾರಾದರೂ ಮೋಸ ಮಾಡಿದರೇ ?  ನಿಂದಿಸಿದರೆ ?ಬೇಜಾರ್ ಮಾಡ್ಕೋಬೇಡಿ ಈ ಒಟ್ಟಿಗಿನ ಜೀವನಯಾತ್ರೆಯು ಇನ್ನು ಸ್ವಲ್ಪ ದೂರ ಮಾತ್ರ ಅಂತ ನೆನೆದುಕೊಂಡರೆ ಸಾಕು.

ನಿಮ್ಮ ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ನೀವು ಶಿಕ್ಷಿಸಲ್ಪಟ್ಟರೆ, ಚಿಂತಿಸಬೇಡಿ . ಅವರೊಟ್ಟಿಗಿನ ಈ ಜೀವನದ ಪಯಣವು ಇನ್ನು ಸ್ವಲ್ಪ ದೂರ ಮಾತ್ರ.

ಮನಸಲ್ಲಿ ಪ್ರೀತಿ, ಸ್ನೇಹ, ಮಾಧುರ್ಯವನ್ನು ತುಂಬಿಕೊಳ್ಳಿ. ಅವು ನಿಮಗೆ ಒಂದು ಅನುಗ್ರಹವಾಗಿವೆ. ಶತ್ರುಗಳಿಗೋ ಅಥವಾ ದ್ವೇಷಿಸುವವರಿಗೋ ಸಿಗದ ಒಂದಾಗಿದೆ ಅವು.

ಆದ್ದರಿಂದ ಇನ್ನುಳಿದ ಕಾಲ ಸಂತೋಷದಿಂದಲೂ, ಸ್ನೇಹದಿಂದಲೂ ಪರೋಪಕಾರದಿಂದಲೂ ಪರಸ್ಪರ ಕ್ಷಮಿಸುತ್ತಾ, ಸಹಿಸುತ್ತಾ  ಮುಂದೆ ಸಾಗೋಣ.

ಹಿಂತಿರುಗಲಾಗದ , ಯಾವಾಗ ಯಾರು ಯಾವ ಸ್ಟಾಪಲ್ಲಿ ಇಳಿಯುವರು ಎಂದು ಮುಂಚೆನೇ ಹೇಳಲಾಗದ ಈ ಪ್ರಯಾಣವು  " ಇನ್ನು ಸ್ವಲ್ಪ ದೂರ ಮಾತ್ರ ".....
Very sensitive messge 😒😒😒😒😒😒😒

No comments:

Post a Comment