Thursday, September 21, 2017

ದಿನಕ್ಕೊಂದು ಸೇಬು

ಡಾಕ್ಟರು ಮತ್ತು  ಎಂಜಿನಿಯರು ಒಂದೇ ಹುಡುಗಿ ಹಿಂದೆ ಬಿದ್ದಿರ್ತಾರೆ.
ಡಾಕ್ಟರು ಹುಡುಗೀನ ಪಟಾಯಿಸೋಕೆ ದಿನಾ ಒಂದೊಂದು ಗುಲಾಬಿ ಕೊಡ್ತಾ ಇರ್ತಾನೆ.
ಎಂಜಿನಿಯರ್ ದಿನಾ ಒಂದು ಸೇಬು ಕೊಡ್ತಾ ಇರ್ತಾನೆ.
ಡಾಕ್ಟರ್ ಹುಡುಗೀನ ಇಂಪ್ರೆಸ್ ಮಾಡೋಕೆ ಡೈಮಂಡ್ ರಿಂಗ್ ತಂದು ಕೊಡ್ತಾನೆ.
ಹುಡುಗಿ ಡೈಮಂಡ್ ರಿಂಗ್ ಇಸ್ಕೋತಾಳೆ.
ಎಂಜಿನಿಯರ್ ಹತ್ರ ಅಷ್ಟೆಲ್ಲ ದುಡ್ಡಿಲ್ಲ. ಅವನು ಸೇಬೂನ್ನೇ ಕೊಡ್ತಾನೆ.
ಈ ತ್ರಿಕೋನ ಲವ್ ಸ್ಟೋರಿಯ ಕ್ಲೈಮಾಕ್ಸಲ್ಲಿ ಹುಡುಗಿ ಡಾಕ್ಟರ್ನ ದೂರ ಮಾಡ್ತಾಳೆ.
ಅದರರ್ಥ?
ಆಕೆ 'ಶ್ರೀಮಂತಿಕೆಗೆ ಬೆಲೆ ಕೊಡಲಿಲ್ಲ' ಅಂತ ಅಲ್ಲ.
ಮತ್ತೆ?
ಆ್ಯನ್ ಆ್ಯಪಲ್ ಎ ಡೇ... ಕೀಪ್ಸ್ ಡಾಕ್ಟರ್ ಅವೇ' ಅಂತ!😀😁😃😄😊

No comments:

Post a Comment