Sunday, October 1, 2017

ಮಗನ ಹುಟ್ಟು ಹಬ್ಬದ ದಿನ...


 ರಾತ್ರಿ 1:30ಕ್ಕೆ ಫೋನ್ ಬರುತ್ತೆ, ಮಗ  ಫೋನ್ ಎತ್ತುತ್ತಾನೆ .
ತಾಯಿ ಹೇಳುತ್ತಾಳೆ " ಹುಟ್ಟುಹಬ್ಬದ ಶುಭಾಶಯ ಚಿನ್ನು"
ಮಗ ಕೋಪದಿಂದ ಇಷ್ಟು ರಾತ್ರಿಯಲ್ಲಿ ಫೋನ್ ಯಾಕೆ ಮಾಡಿದೆ ಬೆಳ್ಳಿಗ್ಗೆ ಮಾಡಿದರೆ ಆಗ್ತಾ ಇರ್ಲಿಲ್ಲ್ವಾ , ನನ್ನ ನಿದ್ದೆ ಎಲ್ಲಾ ಕೆಡಿಸಿಬಿಟ್ಟೆ , ಇಷ್ಟು ಹೇಳಿ ಫೋನ್ ಇಟ್ಟು ಬಿಡುತ್ತಾನೆ.
ಸ್ವಲ್ಪ ಸಮಯದಲ್ಲೇ ತಂದೆಯ ಫೋನ್, ಆದ್ರೆ ಮಗ ಎತ್ತುತ್ತಾನೆ. ಕೋಪಮಾಡಿಕೊಳ್ಳೋದಿಲ್ಲ. ಹೊರತಾಗಿ ಹೇಳ್ತಾನೆ,  ಅಪ್ಪಾ ...ಬೆಳ್ಳಿಗ್ಗೆ ಫೋನ್ ಮಾಡಿದರೆ ಆಗ್ತಿತಲ್ವಾ,

ತಂದೆ : ಮಗಾ ನಾನು ನಿನಗೆ ಒಂದು ವಿಷಯ ಹೇಳಲು ಫೋನ್ ಮಾಡಿದ್ದು .. ಅದೇನೆಂದರೆ  ನಿನ್ನ ತಾಯಿ ಹುಚ್ಚಿ ಕಣೋ, ಇಷ್ಟು ರಾತ್ರಿಯಲ್ಲಿ ನಿಂಗೆ ಫೋನ್ ಮಾಡ್ತಾಳೆ. ಅವಳು 25 ವರ್ಷದ ಹಿಂದೆ ಹುಚ್ಚಿ ಆಗಿದ್ಲು .... ಡಾಕ್ಟರ್ ಆಗಲೇ ಹೇಳಿದ್ರಲ್ವಾ   ಆಪರೇಷನ್ ಮಾಡಿಸಿ, ಇಲ್ಲ ಅಂದ್ರೆ ನಿಮ್ಮ ಹೆಂಡತಿ ಪ್ರಾಣಕ್ಕೆ ಅಪಾಯ ಇದೆ ಅಂತ.  ಆಗ ತನ್ನ ಪ್ರಾಣ ಹೋದ್ರು ಚಿಂತೆ ಇಲ್ಲ ನಾನು ಆಪರೇಷನ್ ಮಾಡಿಸಿಕೊಳ್ಳೋಲ್ಲ ,  ಅಂತಾ ಹೇಳಿ,  ಆವಾಗಲೇ ಅವ್ಳು  ಸಂಪೂರ್ಣ ಹುಚ್ಚಿ ಆಗಿದ್ಲು !

ರಾತ್ರಿ 1:30ಕ್ಕೆ ನೀನು ಹುಟ್ಟಿದೆ, ಆದ್ರೆ ನೀನು ಹುಟ್ಟುವ ದಿನ ಅವಳು ಸಂಜೆ 6ರಿಂದ  1:30 ರ ತನಕ ಹೆರಿಗೆ ನೋವಿನಿಂದ ಬಳಲುತ್ತಿದ್ಲು!
ನಿನು ಹುಟ್ಟಿದ್ದೇ ತಡ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ, ಆ ಎಲ್ಲ ನೋವು ಮರೆತು ಬಿಟ್ಟಿದ್ಲು, ಆದ್ರೆ ನೀನು ಹುಟ್ಟುವ ಮೊದಲು ಡಾಕ್ಟರ್ ನನ್ನ ಹತ್ತಿರ ಬಂದು ಒಂದು ಪತ್ರದಲ್ಲಿ ನನ್ನ ಸೈ ತಗೊಂಡಿದ್ರು. ನಿಮ್ಮ ಹೆಂಡತಿಗೆ ಏನಾದರೂ ಆದ್ರೆ ನಾವು ಹೊಣೆಯಲ್ಲ . ನೀವೇ ಜವಾಬ್ದಾರರು ಅಂತ!

ಮಗಾ.... ನಿನಗೆ ವರ್ಷದಲ್ಲಿ ಒಂದು ದಿನ ರಾತ್ರಿ ಫೋನ್ ಮಾಡಿದಕ್ಕೆ ನಿನ್ನ ನಿದ್ರೆ ಕೆಟ್ಟಿತು ಅಲ್ವಾ , ಆದ್ರೆ ಅವಳು ಪ್ರತಿ ರಾತ್ರಿ 25 ವರ್ಷದಿಂದ 1:30 ಕ್ಕೆ ನನ್ನನ್ನು ಎಬ್ಬಿಸಿ ಹೇಳುತ್ತಾಳೆ, ರೀ.... ನನ್ನ ಚಿನ್ನು ಹುಟ್ಟಿದ್ದು ಇದೆ ಸಮಯದಲ್ಲಿ ಅಲ್ವಾ ಅಂತ....
ಇದನ್ನೇ ಹೇಳಲು ಫೋನ್ ಮಾಡಿದ್ದು ಮಗಾ.. ಬೇರೆ ಏನೂ ಅಲ್ಲ ಅಂತಾ ಹೇಳಿ ಫೋನ್ ಇಟ್ಟು ಬಿಟ್ಟರು ತಂದೆ.

ಮಗನ ಮನಸ್ಸಿಗೆ ತುಂಬಾ ನೋವಾಯಿತು.. ಈ  ಮಾತುಗಳನ್ನು ಕೇಳಿ.   ಬೆಳ್ಳಂಬೆಳಿಗ್ಗೆ ಎದ್ದು ಮನೆಗೆ ಬಂದ.. ತಾಯಿಯ ಕಾಲು ಹಿಡಿದು ಕ್ಷಮೆ  ಕೇಳಿದ,  ಆಗ ತಾಯಿ ಹೇಳ್ತಾಳೆ ರೀ ನೋಡ್ರಿ ನನ್ನ ಚಿನ್ನು ಬಂದಿದ್ದಾನೆ.

ಆಗ ಮಗ ತಂದೆಯ ಕಾಲಿಗೆ ಬಿದ್ದು ಕ್ಷಮಿಸಿ ಎಂದ್ದಾಗ, ತಂದೆ ಹೇಳ್ತಾರೆ  ..... ಇವತ್ತಿನವರೆಗೂ ನಿನ್ನ ತಾಯಿ ಹೇಳ್ತಾಇದ್ಲು ಇನ್ನು ಮುಂದೆ ನಮಗೇನು ಚಿಂತೆ ಇಲ್ಲ , ನಮ್ಮ ಚಿಂತೆಯೆಲ್ಲ ಇನ್ನು ನನ್ನ ಚಿನ್ನು ನೋಡ್ಕೋತಾನೆ ಅಂತಾ.. ಆದರೆ ನೀನು......

ಸರಿ ನೀನು ಈಗ ಹೊರಡು ನಾನು ನಿನ್ನ ತಾಯಿಗೆ ಹೇಳುತ್ತೇನೆ. ಯಾವ ಚಿಂತೆಯು ಮಾಡಬೇಡ ಮೊದಲಿನಂತೆಯೇ ನಾನು ನಿನ್ನ ಜೊತೆ ಇದ್ದು ಈಗಲು ಚೆನ್ನಾಗಿ ನೋಡಿಕೊಳ್ಳುತ್ತೇನೆ.ಅಂತಾ ಹೇಳ್ತೀನಿ....
 ನೀನು ಹೊರಡಪ್ಪಾ ಹೊರಡು. ನಿನಗೆ ನಿನ್ನ ಕೆಲಸ, ನಿನ್ನ ಶೋಕಿಯೇ ಮುಖ್ಯ ಅಲ್ವಾ....
 ಅಷ್ಟರಲ್ಲಿ ತಾಯಿ ಹೇಳ್ತಾರೆ ರೀ..... ಕ್ಷಮಿಸಿ ಅವನನ್ನ... ನಮ್ಮ ಚಿನ್ನು ಎಷ್ಟೇ ಬೆಳೆದರೂ ನಮಗೆ ಅವನು ಪುಟ್ಟ ಮಗು ಥರ ..... ನಮ್ಮ ಮಗ ಅವನು. ನಮ್ಮ ಚಿನ್ನು,,, ನಮ್ಮ ಚಿನ್ನು...
               
ನೀವು, ಬೇಕಾದರೆ ತಂದೆ ತಾಯಿಗೆ ಎಷ್ಟೇ ನೋವು ಕೊಡಿ ಭೂಮಿಮೇಲೆ ತಾಯಿ ಮಾತ್ರ ಅದನ್ನು ಸಹಿಸಿ ತನ್ನ ಮಕ್ಕಳ ಕೆನ್ನೆಯನ್ನು ಸವರಿ ಹೇಳುವವಳು , ನನಗೆ ಏನು ಆಗಿಲ್ಲಾ ಮಗಾ,  ಏನು ಆಗಿಲ್ಲಾ, ಅಂತ ಪ್ರೀತಿ ಕೊಡುವಳು.
         
          ತಂದೆ- ತಾಯಿಗೆ ನಿಮ್ಮ
           ಆಸ್ತಿ , ಅಂತಸ್ತು  ಏನೂಬೇಡ,
           ನೀವೇ ಅವರಿಗೆ ಆಸ್ತಿ, ಅಂತಸ್ತು,

No comments:

Post a Comment